ನನ್ನ ಮಾಹಿತಿ
ಬಾಲ್ಯದಿಂದಲೂ ನನ್ನ ಜೀವನ ತುಂಬಾ ಸಾಮಾನ್ಯವಾಗಿತ್ತು ಇದು ಕಷ್ಟವೂ ಆಗಿರಲಿಲ್ಲ, ಸುಲಭವೂ ಆಗಿರಲಿಲ್ಲ – ಕಷ್ಟವಾಗಿರಲಿಲ್ಲ ಏಕೆಂದರೆ ನನ್ನ ಪೋಷಕರು ನನಗೆ ನಿಜವಾದ ಕಷ್ಟಗಳನ್ನು ಅಥವಾ ನೋವನ್ನು ಅನುಭವಿಸಲು ಅವಕಾಶ ಕೊಟ್ಟಿರಲಿಲ್ಲ, ಹಾಗಾಗಿ ಹೊರಜಗತ್ತಿನ ಕಷ್ಟ ನಷ್ಟಗಳು ನನ್ನ ಅನುಭವಕ್ಕೆ ಬಾರದೆ ಹೋಯಿತು, ಹೀಗಾಗಿ ಜೀವನ ಸುಲಭವಾಗಲಿಲ್ಲ. ನನ್ನ ವ್ಯಕ್ತಿತ್ವವು ಇಂತಹ ವಾತಾವರಣದಿಂದ ಉದ್ಧೀಪಿತವಾಗಿತ್ತು. ಒಂದು ಉತ್ತಮ ಜೀವನವನ್ನು ನನ್ನಡಗಿಸಿಕೊಳ್ಳಲು, ನಾನು ನನ್ನ ಮೇಲೆ ಬಹಳ ಕೆಲಸ ಮಾಡಬೇಕಾಯಿತು. ನನ್ನಲ್ಲಿ ಏನೋ ವ್ಯತ್ಯಾಸವಿದೆ ಎಂದು ನಾನು ಆರಂಭದಿಂದಲೂ ತಿಳಿದಿದ್ದೆ ಆದರೆ ನನ್ನೊಳಗಿನ ಸಮಸ್ಯೆಯನ್ನು ಗುರುತಿಸುವಲ್ಲಿ ವಿಫಲಳಾಗುತ್ತಿದ್ದೆ. ಸಮಸ್ಯೆಯನ್ನು ಗುರುತಿಸಲೆ ನಾನು ನನ್ನ ಜೀವನದ ಸುಮಾರು 30-35 ವರ್ಷಾವಧಿಯನ್ನು ತೆಗೆದುಕೊಂಡೆ. ನಾನು ಸಮಸ್ಯೆಯನ್ನು ಗುರುತಿಸುವ ಹಂತಕ್ಕೆ ಬಂದಾಗ, ಅದನ್ನು ಪರಿಹರಿಸಲು ಕೆಲಸ ಮಾಡಲು ಪ್ರಾರಂಭಿಸಿದೆ, ಮತ್ತು ಸ್ವಲ್ಪವಾದರೂ ಹಂತ ಹಂತವಾಗಿ ನಾನು ಯಶಸ್ವಿಯಾಗುವಂತಾಯಿತು. ನಾನು ನನ್ನ ಜೀವನದ ವಿವಿಧ ಹಂತಗಳಲ್ಲಿ ಎದುರಿಸಿದ್ದ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಅವುಗಳನ್ನು ಪರಿಹರಿಸಲು ತೆಗೆದುಕೊಂಡ ಕ್ರಮಗಳನ್ನು ವಿವರಿಸಲು ಈ ಬ್ಲಾಗ್ ಅನ್ನು ರಚಿಸುತ್ತಿದ್ದೇನೆ. ಇಲ್ಲಿ ನಾನು ಓದುಗರಿಗೆ ಜೀವನವನ್ನು ಉತ್ತಮಗೊಳಿಸಲು ಯಾವುದೇ ಖರ್ಚಿಲ್ಲದೆ ಅಥವಾ ಅತಿ ಕನಿಷ್ಠ ವೆಚ್ಚದಲ್ಲಿ ತಮ್ಮದಗಿಸಿಕೊಳ್ಳುವಂತಹ ವಿವಿಧ ನೈಸರ್ಗಿಕ ಮಾರ್ಗಗಳನ್ನು ಪಟ್ಟಿ ಮಾಡಲಿದ್ದೇನೆ. ನಮ್ಮ ಪ್ರಾಚೀನ ಹಿಂದೂ ಅಭ್ಯಾಸಗಳ ಅರ್ಥ ಮತ್ತು ಮಹತ್ವವನ್ನು ಸಹ ತಿಳಿಸಿಕೊಡಬೇಕೆಂದು ಯೋಜನೆಯು ಇದೆ. ನನ್ನ ನಮ್ಮ ಸ್ವಂತದ ಆಯುರ್ವೇದ ಜೀವನ ಶೈಲೆಯನ್ನು ಗೌರವಿಸುವ ವ್ಯಕ್ತಿಯಾಗಿರುವ ನಾನು, ನನ್ನ ಓದುಗರಿಗೆ ಅದರ ಕೆಲವು ಟಿಪ್ಪಣಿಗಳನ್ನು ನೀಡಲು ಯೋಜಿಸುತ್ತಿದ್ದೇನೆ. ಆದ್ದರಿಂದ, ಹೆಚ್ಚು ಮಾಹಿತಿಯನ್ನು ಈ ಸ್ಥಳವನ್ನು ನೋಡಿ ಮುಂದುವರಿಸುತ್ತಿರಿ.