gd53675121d8e959400122e40dd31fb4629e09376cecd509dd67ad3273089359fb42684099092dab149ce235888568ed7af240818b6eb832391fc8ee5e2accf72_1280-2709642.jpg
ವಿ.ಸೂ. : ಈ ಲೇಖನ ಕೇವಲ ಶೈಕ್ಷಣಿಕ ಉದ್ದೇಶದಿಂದ ಪ್ರಕಟಿಸಲಾಗಿದ್ದು, ಇದರಲ್ಲಿ ಬರುವ ಯಾವುದೇ ಪದ್ಧತಿಯನ್ನು ಉಪಯೋಗಿಸುವ ಮೊದಲು ನಿಮ್ಮ ವೈದ್ಯರ ಅಭಿಪ್ರಾಯದೊಂದಿಗೆ ಮುಂದುವತೆಯಬೇಕೆಂದು ಕೋರಿಕೊಳ್ಳಲಾಗಿದೆ.
ಪೀಠಿಕೆ

ಮೈಗ್ರೇನ್ – ಇದೊಂದು ಇತ್ತೀಚಿನ ಪೀಳಿಗೆಯವರಲ್ಲಿ ಕಂಡು ಬರುವ ಅತ್ಯಂತ ಸಾಮಾನ್ಯ ಕಾಯಿಲೆಯಾಗಿದೆ. ಒಂದು ಅಧ್ಯಯನದ ಪ್ರಕಾರ ಜಗತ್ತಿನ ಕಾಲುಭಾಗದಷ್ಟು ಜನರಿಗೆ ಈ ಮೈಗ್ರೇನ್ ಇದೆಯೆಂದು ಹೇಳಲಾಗಿದೆ. ಕೇವಲ ತೀವ್ರತೆ ಮತ್ತು ಪುನರಾವರ್ತನೆಯಾಗುವ ಸಮಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಬಹುದು. ಕೆಲವರಿಗಂತೂ ತೀವ್ರತೆ ಎಷ್ಟಿರುತ್ತದೆಯೆಂದರೆ ಒಂದು ವಾರದಲ್ಲಿ ಸತತ ಮೂರು ದಿನ ಮೈಗ್ರೇನ್ ತಲೆನೋವಿನಿಂದ ಬಳಲುತ್ತಾರೆ. ಇಂತಹ ತೀವ್ರತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಮತ್ತು ನಿರ್ಲಕ್ಷಿಸಲೂ ಬಾರದು.

ನನ್ನ ಮೈಗ್ರೇನ್ ಅನುಭವ
g5e3ca7cf5efce8005237499615ed242b6822da42b0e9e82b622bf4adb0cc55f821646ff00a81d6ff888360af6db9a7519b481c352a7a2b7a17eec678d604f759_1280-8225398.jpg

ನಾನೂ ಸಹ ಒಂದು ಕಾಲದಲ್ಲಿ ತೀವ್ರ ಸ್ವರೂಪದ ಮೈಗ್ರೇನ್ ಅನ್ನು ಅನುಭವಿಸಿದ್ದೇನೆ. ಇದು ನನ್ನ ಕಾಲೇಜ್ ದಿನಗಳಿಂದಲೆ ಕಂಡುಬಂದಿತ್ತು. ಮೊದ ಮೊದಲು ಅಷ್ಟು ಸಮಸ್ಯೆಯನಿಸಿರಲಿಲ್ಲ .ಹಾಗಾಗಿ ನಿರ್ಲಕ್ಷಿಸಿದೆ. ಸ್ವಲ್ಪ ವರ್ಷಗಳಲ್ಲೇ ಅದು ಎಷ್ಟು ತೀವ್ರ ಸ್ವರೂಪ ಪಡೆಯಿತೆಂದರೆ ವಾರದಲ್ಲಿ 3 ದಿನ ತಲೆನೋವಿನಿಂದ ಬಳಲತೊಡಗಿದೆ. ಅಂದರೆ ಉಳಿದ ನಾಲ್ಕು ದಿನಗಳಲ್ಲಿ ನನ್ನೆಲ್ಲಾ ಕೆಲಸವನ್ನು ಮುಗಿಸಬೇಕಾಗಿತ್ತು. ನಿಸ್ಸಂಶಯವಾಗಿ ನನ್ನ ವೃತ್ತಿಜೀವನ ಇದರ ಪರಿಣಾಮ ಎದುರಿಸುತ್ತಿತ್ತು. ಪತಿ ಅರ್ಥ ಮಾಡಿಕೊಳ್ಳುತ್ತಿದ್ದರಿಂದ ವೈಯುಕ್ತಿಕ ಜೀವನದಲ್ಲಿ ಅಷ್ಟೆಲ್ಲ ಪರಿಣಾಮ ಬೀರಲಿಲ್ಲ.

ಹಿಂದೆಲ್ಲ ನಾನು ಬೇರೆ ಬೇರೆ ತರಹದ ಔಷಧಿಗಳ ಮೊರೆ ಹೋಗಿದ್ದರು ಅದು ಔಷಧಿ ತೆಗೆದುಕೊಳ್ಳುವ ಕೋರ್ಸ್ ನಲ್ಲಿ ಮಾತ್ರ ಬಾಧಿಸುತ್ತಿರಲಿಲ್ಲ. ಆದರೆ ಮುಗಿದ ಸ್ವಲ್ಪ ದಿನಗಳ ನಂತರ ಪುನಃ ಕಾಣಿಸಿ ಕೊಳ್ಳುತಿತ್ತು. ಇದರಿಂದ ಬೇಸತ್ತ ನಾನು ಮೈಗ್ರೇನ್ ಗುಣ ಪಡಿಸುವ ನೈಸರ್ಗಿಕ ವಿಧಾನಗಳನ್ನು ಹುಡುಕತೊಡಗಿದೆ. ನಾನು ಪ್ರಯತ್ನಿಸಿ, ಅಭ್ಯಾಸ ಮಾಡಿದ ಕೆಲವೊಂದು ನೈಸರ್ಗಿಕ ಪರಿಹಾರಗಳನ್ನು ತಲೆನೋವಿನಿಂದ ಬಳಲುವವರಿಗೆ ಉಪಯೋಗವಾಗಬಹುದೆಂಬ ಭರವಸೆಯೊಂದಿಗೆ ಈ ಲೇಖನದಲ್ಲಿ ಮುಂದೆ ಹೇಳಲಿದ್ದೇನೆ.

ಮೈಗ್ರೇನ್ ಪರಿಹಾರಕ್ಕಾಗಿ ನೈಸರ್ಗಿಕ ಉಪಾಯಗಳು

ಈ ಲೇಖನದಲ್ಲಿ ನಾನು ಮುಖ್ಯವಾಗಿ ನಮ್ಮ ಸೂಕ್ಷ್ಮ ಶರೀರ ಮತ್ತು ಅದರಿಂದ ಪ್ರತಿಯಾಗಿ ಭೌತಿಕ ಶರೀರದ ಮೇಲೂ ಪ್ರಭಾವ ಬೀರುವ ಔಷಧಿರಹಿತ ಚಿಕಿತ್ಸಾ ವಿಧಾನದ ಮೇಲೆ ಕೇಂದ್ರೀಕರಿಸಿದ್ದೇನೆ. ಒಂದು ಗಮನದಲ್ಲಿರಿಸಬೇಕಾದ ವಿಷಯವೆಂದರೆ ಮೈಗ್ರೇನ್ ಒಂದು ಜೀವನಶೈಲಿಯ ಕಾಯಿಲೆ. ಅಂದರೆ ನಮ್ಮ ಜೀವನಶೈಲಿಯಲ್ಲಿ ಬೇಡವಾದ ಅನಾರೋಗ್ಯಕರವಾದ ಅಭ್ಯಾಸಗಳು ಕೆಲವೊಮ್ಮೆ ಮೈಗ್ರೆನ್ ಆಗಿ ರೂಪುಗೊಳ್ಳುತ್ತದೆ. ಹಾಗಾಗಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಜೀವನದಲ್ಲಿ ತರುವುದರಿಂದ ಇದನ್ನು ಉತ್ತಮವಾಗಿ ಗುಣಪಡಿಸಬಹುದು. ಇಲ್ಲಿ ಹೇಳಿದ ಎಲ್ಲ ವಿಧಾನಗಳನ್ನು ನಾನು ವೈಯುಕ್ತಿಕವಾಗಿ ಅಭ್ಯಾಸ ಮಾಡಿದ್ದೇನೆ ಹಾಗಾಗಿ ಇವೆಲ್ಲವೂ ಅತ್ಯುತ್ತಮ ವಿಧಾನಗಳೆಂದು ನಾನು ಧೈರ್ಯವಾಗಿ ಹೇಳಬಲ್ಲೆ. ಆದರೆ ನಿಮ್ಮ ತೀವ್ರತೆ, ಕಾಯಿಲೆಯ ವಯಸ್ಸಿನ ಮೇಲೆ ಚಿಕಿತ್ಸೆ ಪರಿಣಾಮ ಬೀರುವ ಸಮಯವೂ ಬೇರೆ ಬೇರೆಯಾಗಿರುತ್ತದೆ. ನಿಧಾನವಾದರೂ ಉತ್ತಮ ಪರಿಣಾಮ ಬೀರುವಲ್ಲಿ ಯಾವುದೇ ಸಂಶಯವಿಲ್ಲ.

ನನ್ನ ಚಿಕಿತ್ಸಾ ಪಟ್ಟಿಗೆ ಪುನಃ ಬರುವುದಾದರೆ, ಈ ಕೆಳಗೆ ನಾನು ಶಿಫಾರಸ್ಸು ಮಾಡುವ ಎಲ್ಲಾ ಪುರಾತನ ಪದ್ಧತಿ ಅಭ್ಯಾಸಗಳನ್ನು ನೀಡಿದ್ದೇನೆ. ಇದರಲ್ಲಿ ನಿಮಗೆ ಸೂಕ್ತವಾಗುವ ಪದ್ಧತಿಯನ್ನು ಅನುಸರಿಸಿ.

ಪ್ರಾಣಾಯಾಮ
pexels-photo-6648543-6648543.jpg

ಮೈಗ್ರೇನ್ ನಿಯಂತ್ರಿಸುವಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುವ ಪ್ರಾಣಾಯಾಮವು ನಮ್ಮ ಅತ್ಯಂತ ಪುರಾತನ ಪದ್ಧತಿಯಾಗಿದೆ. ನಮ್ಮ ಪೂರ್ವಜರು ಪ್ರಾಣಾಯಾಮದ ಅಭ್ಯಾಸದಿಂದಾಗಿ ಉತ್ತಮ ಆರೋಗ್ಯವನ್ನು ಹೊಂದಿದ್ದರು. ಸರಿಯಾದ ಕ್ರಮದಲ್ಲಿ ಉಸಿರಾಡುವುದರಿಂದ ಈ ಮೈಗ್ರೇನ್ ಅಷ್ಟೇ ಅಲ್ಲ, ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು. ಬೆಳಗಿನ ಪ್ರಶಾಂತವಾದ ಸಮಯದಲ್ಲಿ ಅನುಲೋಮ ವಿಲೋಮದಂತಹ ಸರಳ ಪ್ರಾಣಾಯಾಮವನ್ನು ಯಾರು ಬೇಕಾದರೂ ಮಾಡಬಹುದು.

ಮುದ್ರೆ
ಮಹಾಶೀರ್ಷ ಮುದ್ರೆ

ಪ್ರಾಣಾಯಾಮದಂತೆಯೇ ಯೋಗಮುದ್ರೆಯು ಸಹ ನಮ್ಮ ಪೂರ್ವಜರ ಅಪೂರ್ವ ಕೊಡುಗೆಯಾಗಿದೆ. ಮೈಗ್ರೇನ್, ತಲೆನೋವುಗಳ ಪರಿಹಾರಕ್ಕಾಗಿ ಕೆಲವೊಂದು ಮುದ್ರೆಗಳನ್ನು ಸೂಚಿಸಲಾಗಿದೆ. ಜ್ಞಾನ ಮುದ್ರೆ, ಪ್ರಾಣ ಮುದ್ರೆ, ಸಹಸ್ರಾರ ಮುದ್ರೆ ಮುಂತಾದವುಗಳು ಉತ್ತಮ ಪರಿಣಾಮ ನೀಡಬಲ್ಲದು.

ಮಹಾಶೀರ್ಷ ಮುದ್ರೆಯೂ ಸಹ ಮೈಗ್ರೇನ್ ತಲೆನೋವಿಗೆ ಬಹಳಷ್ಟು ಪರಿಣಾಮಕಾರಿ. ಅನಾಮಿಕ ಬೆರಳನ್ನು ಹೆಬ್ಬೆರಳಿನ ಬುಡದಲ್ಲಿರಿಸಿ, ಹೆಬ್ಬೆರಳು, ತೋರ್ಬೆರಳು ಮತ್ತು ಮಧ್ಯ ಬೆರಳುಗಳ ತುದಿಯನ್ನು ಒಟ್ಟುಗೂಡಿಸಬೇಕು. ಕಿರುಬೆರಳನ್ನು ಹಾಗೆಯೇ ಉದ್ದ ಬಿಡಬೇಕು. ಈ ಮಹಾಶೀರ್ಷ ಮುದ್ರೆಯನ್ನು ಹತ್ತರಿಂದ ಹದಿನೈದು ನಿಮಿಷ ಮಾಡುವುದು ಉತ್ತಮ. ಈ ಮುದ್ರೆಯು ತಲೆನೋವಿಗಲ್ಲದೆ, ಕಣ್ಣು, ಕುತ್ತಿಗೆ, ಬೆನ್ನು, ಸೊಂಟದ ಭಾಗಗಳಲ್ಲಿರುವ ಒತ್ತಡವನ್ನೂ ನಿವಾರಿಸುತ್ತದೆ.

ಮುದ್ರೆಯು ನಮ್ಮ ದೇಹದಲ್ಲಿನ ಪಂಚಭೂತ ತತ್ವಗಳನ್ನು ಕೈಲಿರುವ ಮೆರಿಡಿಯನ್ ಬಿಂದುಗಳ ಮೂಲಕ ನಿಯಂತ್ರಿಸಿ ದೇಹದಲ್ಲಿನ ಆರೋಗ್ಯ ಕಾಪಾಡುತ್ತದೆ. ಯಾವುದೇ ಮುದ್ರೆಗಳನ್ನು ಕುಳಿತಲ್ಲಿಯೇ ದಿನದಲ್ಲಿ 10-15 ನಿಮಿಷಗಳ ಕಾಲ ಅಭ್ಯಾಸ ಮಾಡಿದರೆ ಕೇವಲ ಒಂದೆರಡು ತಿಂಗಳಿನಲ್ಲಿಯೇ ವ್ಯತ್ಯಾಸ ಕಾಣಬಹುದು.

ಆರೋಗ್ಯಕರ ಆಹಾರ
g042ec5607a6e64ea51de1e651b7a76f313ded32fabe56cb983dc1dce8b018b8c93a421fe77771b8f72e87af0753ff12c62c2818c1b0b748bbfa137938cedc37f_1280-1085063.jpg

ಆರೋಗ್ಯಯುತ ಜೀವನಕ್ಕಾಗಿ ಆರೋಗ್ಯಯುತ ಆಹಾರವೂ ಬಹಳ ಮುಖ್ಯ. ನಿಮ್ಮ ದೇಹಕ್ಕೆ ಯಾವ ಆಹಾರ ಒಳ್ಳೆಯದು, ಯಾವ ಅಹಾರ ಒಳ್ಳೆಯದಲ್ಲ ಎಂದು ನೀವೇ ಗಮನಿಸಿ ನಿರ್ಧರಿಸಬೇಕು. ಏಕೆಂದರೆ ಪ್ರತಿಯೊಬ್ಬರೂ ವಿಭಿನ್ನ ಹಾಗೆಯೇ ಅವರವರ ದೇಹ ಆಹಾರವನ್ನು ಸ್ವೀಕರಿಸುವ ರೀತಿಯೂ ವಿಭಿನ್ನವಾಗಿರುತ್ತದೆ. ಒಬ್ಬರಿಗೆ ಒಳ್ಳೆಯಾದಾದ ಆಹಾರ ಇನ್ನೊಬ್ಬರಿಗೆ ಒಳ್ಳೆಯದಾಗಿರಲೇಬೇಕೆಂಬ ನಿಯಮವಿಲ್ಲ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಪುಟ್ಟ ಬಾಳೆಹಣ್ಣನ್ನು ನಾನು ಬಹಳಷ್ಟು ತಿಂದುಬಿಡುತ್ತಿದ್ದೆ. ಏಕೆಂದರೆ ಬಾಳೆಹಣ್ಣು ಆರೋಗ್ಯಕರ ಆಹಾರವಲ್ಲವೆಂದು ಯಾರು ಹೇಳುತ್ತಾರೆ? ಆದರೆ ನನ್ನ ದೇಹ ಅದಕ್ಕೆ ಒಗ್ಗಿ ಕೊಳ್ಳುತ್ತಿರಲಿಲ್ಲ. ಯಾವಾಗ ಒಂದಕ್ಕಿಂತ ಹೆಚ್ಚು ಪುಟ್ಟ ಬಾಳೆ ತಿಂದೇನೋ ಅದರ ಮಾರನೆಯ ದಿನ ಇಲ್ಲವಾದ ಮೈಗ್ರೇನ್ ಬಂದುಬಿಡುತ್ತಿತ್ತು. ಅದಾಗಲೇ ಇದ್ದಿದ್ದರೆ ಇನ್ನೂ ಗಂಭೀರ ಸ್ವರೂಪ ತಾಳುತ್ತಿತ್ತು.

ರೇಕಿ
ge393ea6b6e49233be69ed9165a47b3cfedc46b626445b84eb4b09fecd7d108f6894e31d02962ec8d67a07cd33719cbc0_1280-285590.jpg

ಇದು ನನ್ನ ಮೆಚ್ಚಿನ ಚಿಕಿತ್ಸಾ ವಿಧಾನ. ಇದರಿಂದ ನನ್ನ ಅರ್ಧದಷ್ಟು ಮೈಗ್ರನ್ ಗುಣವಾಗಿತ್ತು. ನಾನು ರೇಕಿ ದೀಕ್ಷೆ ಪಡೆದದ್ದು ಸುಮಾರು ಐದು ವರುಷಗಳ ಹಿಂದೆ. ಅಲ್ಲಿಂದ ತಿರುಗಿ ನೋಡಿದ್ದೆ ಇಲ್ಲ. ನಾನು ಮೈಗ್ರೇನ್ ನಿಂದ ಬಳಲುವ ದಿನಗಳಲ್ಲಿ ನಿರ್ದಿಷ್ಟವಾಗಿ ಅದಕ್ಕೆಂದೇ ರೇಕಿ ಕಳುಹಿಸಲು ತಾಳ್ಮೆ ಇರುತ್ತಿರಲಿಲ್ಲವಾದರೂ ಉಳಿದ ದಿನಗಳಲ್ಲಿ ತಪ್ಪದೇ ಮಾಡಿಕೊಳ್ಳುತ್ತಿದ್ದೆ. ಅದರಿಂದಾಗಿ ಕ್ರಮೇಣವಾಗಿ ಅದರ ತೀವ್ರತೆ ಕಡಿಮೆಯಾಗುತ್ತಾ ಬಂದಿತ್ತು. ಮೈಗ್ರೇನ್ ನಿವಾರಣೆಯಲ್ಲಷ್ಟೆ ಅಲ್ಲ, ರೇಕಿ ಯ ನಿಯಮಿತ ಅಭ್ಯಾಸದಿಂದಾಗಿ ನನ್ನ ಜೀವನದಲ್ಲಿ ಹೊಸ ಚೈತನ್ಯ, ಉತ್ಸಾಹ, ಸಂತೋಷ ನೆಮ್ಮದಿ ಎಲ್ಲವೂ ಮೂಡತೊಡಗಿತು. ಹಾಗಾಗಿ ಮೈಗ್ರೇನ್ ಅನ್ನುವ ಮಾರಿಗೆ ಜಾಗವಿಲ್ಲದಾಗಿತ್ತು.

ಸ್ವಿಚ್ ವರ್ಡ್ ಮತ್ತು ನಂಬರ್ ಕೋಡ್ಗಳು
Oplus_131072

ಸ್ವಿಚ್ ವರ್ಡ್ ಅಂದರೆ ಒಂದರ್ಥದಲ್ಲಿ ಇಂಗ್ಲಿಷ್ ನ ಮಂತ್ರಗಳಿದ್ದಂತೆ. ಎಲ್ಲಾ ಮಂತ್ರಗಳು ಒಂದೊಂದು ರೀತಿಯ ಕಂಪನಗಳನ್ನು ಉಂಟುಮಾಡುತ್ತವೆ. ಅದೇ ರೀತಿಯಲ್ಲಿ ಈ ಇಂಗ್ಲಿಷ್ ಶಬ್ದಗಳೂ ಸಹ ಕಂಪನಗಳನ್ನು ಹೊರ ಹಾಕುತ್ತವೆ. ಆದರೆ ಅದರ ಅರ್ಥಕ್ಕೂ, ಅದರ ಉಪಯೋಗಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಹಾಗಾಗಿ ನನಗೆ ಮೈಗ್ರೇನ್ ಉಂಟಾದ ದಿನಗಳಲ್ಲಿ ಕೆಲವೊಮ್ಮೆ ಯಾವುದೇ ಚಿಕಿತ್ಸೆಗೆ ಸಮಯ ಹೊಂದಿಸಲು ಸಾಧ್ಯವಾಗದಿದ್ದರೆ ನಾನು ಕೆಲವೊಂದು ಕೊಡ್ ನಂಬರ್ ಗಳನ್ನು ಬಳಸುತ್ತಿದ್ದೆ. ಸ್ವಲ್ಪ ಸಮಯದಲ್ಲೇ ತಲೆನೋವು ಕಡಿಮೆಯಾಗುತ್ತಿತ್ತು. ನೀವೇನಾದರೂ ಸ್ವಿಚ್ ವರ್ಡ್ ಗಳ ಬಗ್ಗೆ ಮತ್ತಷ್ಟು ತಿಳಿಯ ಬಯಸಿದರೆ blu iris.com ಈ ತಾಣಕ್ಕೆ ಭೇಟಿ ನೀಡಬಹುದು.

ಮುಕ್ತಾಯ

ಕೆಲವೊಂದು ಜೀವನಶೈಲಿಯ ಕಾಯಿಲೆಗಳಿಗೆ ಉತ್ತಮ ಜೀವನಶೈಲಿಯೇ ಪರಿಹಾರವೆಂದು ನನ್ನ ಅಭಿಪ್ರಾಯ. ನಾನು ಮೊದಲಿನಿಂದಲೂ ಸಹ ಔಷಧಿಗಳ ಚಿಕಿತ್ಸೆ ಗಿಂತ ಔಷಧಿ ರಹಿತ ಚಿಕಿತ್ಸಾ ಪದ್ಧತಿಗೆ ಸಾಕಷ್ಟು ಮನ್ನಣೆ ನೀಡುತ್ತಾ ಬಂದಿದ್ದೇನೆ. ಔಷಧಿಗಳ ಪ್ರಾಮುಖ್ಯತೆಯನ್ನು ಅಲ್ಲಗಳೆಯುತ್ತಿಲ್ಲ. ಆದರೆ ನಮ್ಮ ಉತ್ತಮ ಜೀವನಶೈಲಿಯು ಸಹ ಅಷ್ಟೇ ಮುಖ್ಯ. ಇಂತಹ ಪದ್ಧತಿಗಳಿಂದ ನಮ್ಮ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಗಳಿಲ್ಲದೇ ಬದಲಾಗಿ ನಮ್ಮ ಶಕ್ತಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಅಭ್ಯಾಸಗಳನ್ನು ಪ್ರಯತ್ನಿಸಿ ನೋಡಬಾರದೇಕೆ?


Discover more from cosmiqgrace.com

Subscribe to get the latest posts sent to your email.

Leave a Reply

Author

cosmiqgrace@gmail.com

Related Posts