ಸ್ವಾಧಿಷ್ಠಾನ ಚಕ್ರವು ನಮ್ಮ ದೇಹದ ಚಕ್ರ ವ್ಯವಸ್ಥೆಯ ಎರಡನೇ ಚಕ್ರವಾಗಿದೆ. ಇದು ಒಂದು ಮುಖ್ಯ ಶಕ್ತಿ ಕೇಂದ್ರ ಏಕೆಂದರೆ ಇದು ನಮ್ಮ ಸೃಜನಶೀಲತೆ, ಲೈಂಗಿಕ ಶಕ್ತಿ ಮುಂತಾದವುಗಳ ಜೊತೆ ಸಂತಾನೋತ್ಪತ್ತಿ ಅಂಗಗಳು, ಮೂತ್ರಕೋಶ, ಮೂತ್ರಪಿಂಡ ಮುಂತಾದ ಅಂಗಗಳನ್ನು ನಿಯಂತ್ರಿಸುತ್ತದೆ. ಈ ಲೇಖನದಲ್ಲಿ ಸ್ವಾಧಿಷ್ಠಾನ ಚಕ್ರದ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದೇನೆ.

ಸ್ವಾಧಿಷ್ಠಾನ ಚಕ್ರ ಎಂದರೇನು?

ಸ್ವಾಧಿಷ್ಠಾನ ಎಂಬ ಪದದ ಅರ್ಥ ಸ್ವ ಸ್ಥಾನ. ಇದು ಮಾನವನ ವಿಕಾಸದ ಎರಡನೇ ಚಕ್ರವಾಗಿದೆ. ಅಂದರೆ, ಬದುಕುಳಿಯುವ ಹಂಬಲ ಕೊಡುವ ಮೂಲಾಧಾರದ ನಂತರ ಬದುಕಿನ ಒಟ್ಟಾರೆ ಸಂತೋಷ ನೀಡುವ ಈ ಚಕ್ರದ ಪಾತ್ರ ಅತಿ ಮುಖ್ಯವಾಗಿದೆ.

ಸ್ವಾಧಿಷ್ಠಾನ ಚಕ್ರ ಎಲ್ಲಿದೆ?

ಸ್ವಾಧಿಷ್ಠಾನ ಚಕ್ರವು ಕೆಳಹೊಟ್ಟೆಯ ಭಾಗದಲ್ಲಿ, ಪ್ಯೂಬಿಕ್ ಮೂಳೆಯ ಮಧ್ಯದಲ್ಲಿ ಇರುತ್ತದೆ. ಗರ್ಭ ಭಾಗದಲ್ಲಿ ಇರುವುದರಿಂದ ಜನನ ಮರಣದ ಮಜಲನ್ನೂ ಇದು ಸೂಚಿಸುತ್ತದೆ.

ಸ್ವಾಧಿಷ್ಠಾನ ಚಕ್ರದ ಗುಣ ಲಕ್ಷಣಗಳು

ಚಕ್ರಗಳು ಯಾವುದೇ ಬಣ್ಣ, ಆಕಾರ ಇಲ್ಲದ ಶಕ್ತಿ ಕೇಂದ್ರಗಳಾದರೂ ಸಹ ಅದರ ಗುಣಲಕ್ಷಣ, ತತ್ವದ ಮೇಲೆ ಬಣ್ಣ, ಆಕಾರ ಕೊಟ್ಟು ಗುರುತಿಸುತ್ತೇವೆ. ಅಂತಹ ಕೆಲವೊಂದು ಮಾಹಿತಿ ಈ ಕೆಳಗೆ ಪಟ್ಟಿ ಮಾಡಿದ್ದೇನೆ.

ಬಣ್ಣ : ಕಿತ್ತಳೆ

ಚಿನ್ಹೆ :

ತತ್ವ : ಜಲ

ಕಂಪನ : 417 hz

ಬೀಜಮಂತ್ರ : ವಂ

ಸ್ವಾಧಿಷ್ಠಾನ ಚಕ್ರದ ಬಗ್ಗೆ ಇನ್ನಷ್ಟು ಮಾಹಿತಿ

ಸ್ವಾಧಿಷ್ಠಾನ ಚಕ್ರದ ಸ್ಥಾನವು ಅದರ ಕೆಲಸ ಮತ್ತು ಜವಾಬ್ದಾರಿಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಅದು ಕೆಳ ಹೊಟ್ಟಯಲ್ಲಿ ಇರುವುದರಿಂದ ಭೌತಿಕವಾಗಿ ಸಂತಾನೋತ್ಪತ್ತಿ ಅಂಗಗಳನ್ನು ನಿಯಂತ್ರಿಸುತ್ತದೆ. ಇದು ವ್ಯಾನ ಪ್ರಾಣ ಶಕ್ತಿಯ ಸಂಗ್ರಹಣೆ ಮತ್ತು ವಿತರಣೆ ಮಾಡುವುದರಿಂದ ಜಲದ ತತ್ವನ್ನು ನಮ್ಮ ದೇಹದಲ್ಲಿ ನಿಯಂತ್ರಿಸುತ್ತದೆ. ಹಾಗಾಗಿ ಮೂತ್ರಕೋಶ, ಮೂತ್ರಪಿಂಡ, ಮುಂತಾದ ಅಂಗಗಳ ಜೊತೆಯೂ ಸಂಬಂಧ ಹೊಂದಿರುತ್ತದೆ. ಅದಲ್ಲದೆ ಇದು ಗರ್ಭ ಭಾಗವಾಗಿರುವುದರಿಂದ ಜನನವನ್ನೂ ಸೂಚಿಸುತ್ತದೆ. ಅಂದರೆ, ಯಾವುದೇ ವ್ಯಕ್ತಿ ಅಥವಾ ವಸ್ತುವನ್ನು ನಮ್ಮ ಜೀವನದಲ್ಲಿ ತರಬೇಕೆಂದರೆ ಈ ಚಕ್ರ ಸಹಕರಿಸಬೇಕು.

ನಮ್ಮೊಳಗಿನ ಮಗುವನ್ನೂ ಸಹ ಈ ಚಕ್ರ ಸೂಚಿಸುತ್ತದೆ. ಸೃಜನಶೀಲತೆ, ಸಂತೋಷ ಮುಂತಾದ ಗುಣಗಳೂ ಸಹ ಇದರೊಂದಿಗೆ ಹೊಂದಿಕೊಂಡಿವೆ. ಹಳೆಯ ಆಘಾತಗಳೆಲ್ಲ ಈ ಚಕ್ರದಲ್ಲಿ ಸಂಗ್ರಹಗೊಳ್ಳುತ್ತದೆ. ಹಾಗಾಗಿ ನಾವು ಆಘಾತದಿಂದ ಹೊರಬಂದಿದ್ದೇವೆಂದು ನಮಗನ್ನಿಸಿದರೂ ಸಹ ಅವು ಸಮಯದೊಂದಿಗೆ ಕೆಳ ಬಂದು ಈ ಸ್ವಾಧಿಷ್ಠಾನ ಚಕ್ರದಲ್ಲಿ ಉಳಿಯುತ್ತದೆ. ಇದನ್ನು ಬುಡ ಸಮೇತ ತೆಗೆದು ಹಾಕದಿದ್ದರೆ ನಮ್ಮ ಜೀವನ ಪರ್ಯಂತ ಒಂದೆಲ್ಲ ಒಂದು ಸಮಸ್ಯೆಗೆ ಕಾರಣವಾಗುತ್ತದೆ.

ನೀರಿಗೆ ಯಾವುದೇ ಬಣ್ಣವಿಲ್ಲದಿದ್ದರೂ ಸಹ ಜಲತತ್ವದ ಈ ಚಕ್ರದ ಬಣ್ಣ ಕಿತ್ತಳೆ. ಏಕೆಂದರೆ ಇದು ಇರುವುದು ಕೆಂಪು(ಮೂಲಾಧಾರ) ಮತ್ತು ಹಳದಿ (ಮಣಿಪುರ) ಚಕ್ರದ ಮಧ್ಯದಲ್ಲಿ. ಇವೆರಡೂ ಬಣ್ಣಗಳೂ ಸೇರಿ ಕಿತ್ತಳೆ ಬಣ್ಣದಿಂದ ಸೂಚಿಸುತ್ತಾರೆ.

ಸ್ವಾಧಿಷ್ಠಾನ ಚಕ್ರದ ಚಿನ್ಹೆಯಲ್ಲಿ ಕಾಣಸಿಗುವ ಆರು ಕಮಲದ ದಳಗಳು ನಾವು ಗೆಲ್ಲಬೇಕಾದ ಅರಿಷಡ್ವರ್ಗಗಳನ್ನು ಸೂಚಿಸುತ್ತದೆ. ನಡುವಿನ ವೃತ್ತಾಕಾರ ಮತ್ತು ಅರ್ಧ ಚಂದ್ರಾಕೃತಿಯು ಜನನ ಮರಣದ ಆವರ್ತನೆಯನ್ನು ಸೂಚಿಸುತ್ತದೆ.

ಸಂತುಲಿತ ಸ್ವಾಧಿಷ್ಠಾನ ಚಕ್ರ

ಸ್ವಾಧಿಷ್ಠಾನ ಚಕ್ರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಅದು ನಮ್ಮ ಆಸೆ ಆಕಾಂಕ್ಷೆಗಳಿಗೆ ಒಂದು ರೂಪ ಕೊಟ್ಟು ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ. ನಮ್ಮ ಭಾವನಾತ್ಮಕ ಅಗತ್ಯತೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಸಕ್ರಿಯ ಸ್ವಾಧಿಷ್ಠಾನ ಚಕ್ರ ಹೊಂದಿರುವ ವ್ಯಕ್ತಿಯ ಕೆಲವು ನಡವಳಿಕೆ ಈ ಕೆಳ ಕಂಡಂತೆ ಕಾಣಬಹುದು.

  • ಧೃಡ ಭಾವನಾತ್ಮಕ ನಿಲುವು.
  • ಭಾವನೆಗಳನ್ನು ಸಂದರ್ಭೋಚಿತವಾಗಿ ನಿಯಂತ್ರಿಸುವುದು.
  • ತನ್ನನ್ನು ತಾನು ಯಾವುದೇ ಸಂದರ್ಭದ ಬಲಿಪಶು ಎಂದು ನೋಡದೆ ಇರುವುದು.
  • ಯಾವುದೇ ಸಂದರ್ಭವಿರಲಿ, ವ್ಯಕ್ತಿ ಯಾರೇ ಇರಲಿ ಎಲ್ಲರೊಂದಿಗೂ ಉತ್ತಮವಾಗಿ ನಡೆದುಕೊಳ್ಳುವುದು.
  • ಹಿರಿಯರು, ಕಿರಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವುದು.
  • ಸ್ವಾಧಿಷ್ಠಾನ ಚಕ್ರದ ಸುತ್ತ ಮುತ್ತಲಿನ ಅಂಗಗಳ ಸಂಪೂರ್ಣ ಆರೋಗ್ಯ.
ಸುಪ್ತ ಸ್ವಾಧಿಷ್ಠಾನ ಚಕ್ರದ ಲಕ್ಷಣಗಳು

ಸ್ವಾಧಿಷ್ಠಾನ ಚಕ್ರ ಸುಪ್ತತೆ ಹೊಂದಿದರೆ, ನಿಷ್ಕ್ರಿಯ ಅಥವಾ ಅತಿ ಕ್ರಿಯಾಶೀಲವಾಗಿದ್ದರೆ ಅದು ಕೆಲವೊಂದು ದೈಹಿಕ/ಮಾನಸಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಅವುಗಳ ಬಗ್ಗೆ ಒಂದೊಂದಾಗಿ ನೋಡೋಣ.

ದೈಹಿಕ ಲಕ್ಷಣಗಳು
  • ಸಂಧಿವಾತ
  • ದೀರ್ಘಕಾಲದ ಸೊಂಟನೋವು
  • ರಕ್ತಹೀನತೆ
  • ಲೈಂಗಿಕ ಸಮಸ್ಯೆ
  • ಮುಟ್ಟಿನ ಸಮಸ್ಯೆ
  • ಮೂತ್ರನಾಳದ ಸಮಸ್ಯೆ
  • ಸುಸ್ತು
ಮಾನಸಿಕ ಲಕ್ಷಣಗಳು
  • ಏರುಪೇರಿನ ಮನಸ್ಥಿತಿ.
  • ಬೇರೆಯವರ ಮೇಲೆ ಅತಿಯಾದ ಪ್ರಾಬಲ್ಯ ತೋರಿಸುವುದು ಅಥವಾ ಸ್ವತಃ ಬೇರೆಯವರ ಪ್ರಾಬಲ್ಯಕ್ಕೊಳಗಾಗುವುದು.
  • ಅತ್ಯಂತ ಸ್ವಾರ್ಥಿಗಳು / ಅಥವಾ ಬೇರೆಯವರಿಗಾಗಿ ತಮ್ಮನ್ನು ತಾವು ಸಂಪೂರ್ಣ ನಿರ್ಲಕ್ಷಿಸುವುದು.
  • ವ್ಯಸನಿಗಳು
  • ಏಕಾಂಗಿಗಳು
  • ಬೇರೆಯವರ ಜೊತೆ ವ್ಯವಹರಿಸಲು ತಪ್ಪಿಸಲು ತಮ್ಮನ್ನು ತಮ್ಮ ಕೆಲಸದಲ್ಲಿ ಕಾರ್ಯನಿರತರಂತೆ ತೋರಿಸಿಕೊಳ್ಳುವುದು
  • ಸಂವೇದನಾ ಬಯಕೆಗಳನ್ನು ನಿಯಂತ್ರಿಸಿ ಕೊಳ್ಳಲು ವಿಫಲತೆ
  • ಸೃಜನಶೀಲತೆಯ ಕೊರತೆ
  • ಖಿನ್ನತೆ
ಅಸಂತುಲಿತ ಸ್ವಾಧಿಷ್ಠಾನ ಚಕ್ರವನ್ನು ಸಂತುಲಿತಗೊಳಿಸುವುದು.

ಸ್ವಾಧಿಷ್ಠಾನ ಚಕ್ರವು ನಮ್ಮ ದೇಹದ ಶಕ್ತಿಯ ಹರಿವಿನಲ್ಲಿ ಸಾಮರಸ್ಯತೆಯನ್ನು ಉಂಟು ಮಾಡುತ್ತದೆ. ಹಾಗಾಗಿ ಜೀವನದಲ್ಲಿ ಉತ್ಸಾಹತೆ ಉಳಿಸಿಕೊಳ್ಳಲು ಈ ಚಕ್ರದ ಸಂತುಲನ ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕೆಲವೊಂದು ಚಿಕಿತ್ಸಾ ವಿಧಾನಗಳನ್ನು ಇಲ್ಲಿ ನೀಡಿದ್ದೇನೆ.

೧. ಮಂತ್ರ:

ಚಕ್ರಗಳ ಚಲನೆಯಿಂದ ಕೆಲವೊಂದು ಕಂಪನಗಳು ಹೊರಬರುತ್ತವೆ. ಈ ಕಂಪನಗಳು ಶಬ್ದವಾಗಿ ಮಾರ್ಪಡುತ್ತವೆ. ನಂತರ ಇದನ್ನು ಬೀಜಮಂತ್ರ ಗಳಾಗಿ ಗುರುತಿಸಲಾಗಿದೆ. ಇದರಲ್ಲಿ ಸ್ವಾಧಿಷ್ಠಾನ ಚಕ್ರದ ಮಂತ್ರ ‘ವಂ’. ಈ ಬೀಜಮಂತ್ರವನ್ನು ನಿಯಮಿತವಾಗಿ ಕೇಳುವುದರಿಂದ ಅಥವಾ ಪಠಿಸುವುದರಿಂದ ಸ್ವಾಧಿಷ್ಠಾನ ಚಕ್ರದ ಶಕ್ತಿಯನ್ನು ಪುನಃ ಪ್ರತಿಷ್ಠಾಪಿಸಬಹುದು

.೨. ಧನಾತ್ಮಕ ವಾಕ್ಯಗಳನ್ನು ಪಠಿಸುವುದು:

ಧನಾತ್ಮಕ ವಾಕ್ಯಗಳನ್ನು ನಿರಂತರವಾಗಿ ನಿರ್ದಿಷ್ಟ ಸಮಯ(೧೦-೧೫ ನಿಮಿಷ) ಪಠಿಸುವುದರಿಂದ ನಮ್ಮ ಸುಪ್ತ ಮನಸ್ಸು ಅದನ್ನು ನಂಬುವಂತೆ ಮಾಡುತ್ತದೆ ಮತ್ತು ಅದನ್ನು ಸತ್ಯವಾಗಿಸಲು ಕೆಲಸ ಮಾಡುತ್ತದೆ. ಹಾಗಾಗಿ ಈ ಕೆಳಗೆ ನೀಡಿರುವ ಧನಾತ್ಮಕ ವಾಕ್ಯಗಳನ್ನು ಸ್ವಾಧಿಷ್ಠಾನ ಚಕ್ರವನ್ನು ಜಾಗೃತಗೊಳಿಸಲು ಬಳಸಬಹುದು

  • ನಾನೊಬ್ಬ ಸೃಜನಶೀಲ ವ್ಯಕ್ತಿ.
  • ನಾನು ಬದಲಾವಣೆಯನ್ನು ಸಂತೋಷದಿಂದ ಒಪ್ಪಿಕೊಳ್ಳೋತ್ತೇನೆ.
  • ನಾನು ನನ್ನ ಭಾವನೆಗಳನ್ನು ಸಮತೋಲನದಿಂದಿರಿಸ ಬಲ್ಲವನಾಗಿದ್ದೇನೆ
  • ಜೀವನದಲ್ಲಿ ಸಂತೋಷದಿಂದಿರಲು ನಾನು ಅರ್ಹನಾ(ಳಾ) ಗಿದ್ದೇನೆ
  • ಬೇಷರತ್ತಾಗಿ ಪ್ರೀತಿ ಪಡೆಯಲು ನಾನು ಅರ್ಹನಾ(ಳಾ) ಗಿದ್ದೇನೆ

ಇವುಗಳಲ್ಲಿ ನಿಮಗೆ ಹೊಂದಿಕೆಯಾಗುವ ಯಾವುದಾದರು ಒಂದು ವಾಕ್ಯವನ್ನು ತೆಗೆದುಕೊಂಡು ಪಠಿಸಿ ನೋಡಿ.

೩. ಸ್ವಾಧಿಷ್ಠಾನ ಚಕ್ರದ ಧ್ಯಾನ
gbf658a20e9362f570b451dd67405ed357d6e952924cd1cb3105642bd07b38362e001e080f16b5ccc2395481ecc8473862d92aeef5b2a38433771c991ea325c86_1280-7465757.jpg

ಮನುಜ ಕುಲಕ್ಕೆ ಧ್ಯಾನ ಒಂದು ಅಧ್ಭುತ ಕೊಡುಗೆ. ಧ್ಯಾನದಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ನಿರ್ದಿಷ್ಟವಾಗಿ ಸ್ವಾಧಿಷ್ಠಾನ ಚಕ್ರವನ್ನು ಸಕ್ರಿಯಗೊಳಿಸಲು ಕೆಲವು ಧ್ಯಾನ ಕ್ರಮಗಳಿವೆ. ಅದು ಸಾಧ್ಯವಾಗದೇ ಹೋದರೆ ವಂ ಬೀಜಮತ್ರದ ಮೇಲೆ ಧ್ಯಾನ ಮಾಡಿರಿ.

೪. ಜಲಮೂಲಗಳೊಡನೆ ಸಮಯ ಕಳೆಯುವುದು:
pexels-photo-3785191-3785191.jpg

ಈಗಾಗಲೇ ನಿಮಗೆ ತಿಳಿದಿರುವಂತೆ ಸ್ವಾಧಿಷ್ಠಾನ ಚಕ್ರ ಜಲ ತತ್ವಕ್ಕೆ ಸಂಬಂಧಿಸಿದ ಚಕ್ರವಾಗಿದೆ. ಅಂದರೆ ಇದರ ಉತ್ತಮ ಕಾರ್ಯ ಕ್ಷಮತೆಗಾಗಿ ನೀರಿನ ಜೊತೆ ಹೆಚ್ಚು ಹೆಚ್ಚು ಸಂಪರ್ಕ ಬೆಳೆಸುವುದು. ಜಲಮೂಲಗಳಾದ ನದಿ, ಸಮುದ್ರ, ಕೆರೆ, ಸರೋವರ ಮುಂತಾದ ಕಡೆ ಸಾಧ್ಯದಷ್ಟು ಸಮಯ ಕಳೆಯುವುದು(ಸೂಕ್ತ ರಕ್ಷಣೆಯ ಜೊತೆ). ಸ್ನಾನ ಮಾಡುವುದು ಕೂಡಾ ಒಂದು ಉತ್ತಮ ವಿಚಾರ.

೫. ಕಿತ್ತಳೆ ಬಣ್ಣದ ಬಳಕೆ:
pexels-photo-6794937-6794937.jpg

ಈ ಚಕ್ರವು ಕಿತ್ತಳೆ ಬಣ್ಣದೊಂದಿಗೆ ಗುರುತಿಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ, ಕೋಣೆಯಲ್ಲಿ ಹೆಚ್ಚು ಹೆಚ್ಚು ಕಿತ್ತಳೆ ಬಣ್ಣ ಬಳಸಿ, ಕಿತ್ತಳೆ ಪರದೆ, ಕಿತ್ತಳೆ ಬಣ್ಣದ ಧ್ಯಾನದ ಆಸನ, ಇತ್ಯಾದಿ. ಕಿತ್ತಳೆ ಬಣ್ಣದ ಬಟ್ಟೆಯನ್ನೂ ಹೆಚ್ಚು ಹೆಚ್ಚು ಬಳಸಬಹುದು.

೬. ರೇಕಿ

ರೇಕಿಯನ್ನು ಸ್ವಾಧಿಷ್ಠಾನ ಚಕ್ರದ ಕಡೆಗೆ ಕಳುಹಿಸುವುದರಿಂದ ಅದನ್ನು ಸಕ್ರಿಯಗೊಳಿಸಲು ಸಾಧ್ಯವಿದೆ. ನೀವು ರೇಕಿ ಅಭ್ಯಾಸಿಗರಗಿದ್ದರೆ ಈ ಕೆಲಸ ಇನ್ನಷ್ಟು ಸುಲಭ. ರೇಕಿ ದೀಕ್ಷೆ ಪಡೆದಿಲ್ಲದವರಾದರೆ ಒಬ್ಬ ರೇಕಿ ಅಭ್ಯಾಸಿಗನಿಂದ ಈ ಚಿಕಿತ್ಸೆ ಪಡೆಯಬಹುದು.

೭. ಯೋಗಾಸನ
pexels-photo-3758056-3758056.jpg

ನಮ್ಮ ಯೋಗಾಸನದಲ್ಲಿ ಬಹಳಷ್ಟು ಆಸನಗಳು ಸ್ವಾಧಿಷ್ಠಾನ ಚಕ್ರವನ್ನು ಉತ್ತೇಜಿಸುತ್ತದೆ. ಕೆಲವೊಂದು ಅಂತಹ ಆಸನಗಳೆಂದರೆ ಉತ್ತನಾಸನ, ಕಾಕಾಸನ, ಅಧೋಮುಖ ವೃಕ್ಷಾಸನ, ತ್ರಿಕೋನಾಸನ, ಆನಂದ ಆನಂದ ಬಾಲಾಸನ, ಬದ್ದ ಕೋನಾಸನ ಮುಂತಾದವು. ಈ ಆಸನಗಳನ್ನು ಉತ್ತಮ ಯೋಗ ಗುರುಗಳಲ್ಲಿ ಕಲಿತು ಅಭ್ಯಾಸ ಮಾಡುವುದು ಒಳಿತು.

ಕೊನೆಯದಾಗಿ..

ಸಂತುಲಿತ ಸ್ವಾಧಿಷ್ಠಾನ ಚಕ್ರ ನಮ್ಮ ಜೀವನದ ಗುಣಮಟ್ಟದ ಮೇಲೆ iಧನಾತ್ಮಕ ಪರಿಣಾಮ ಬೀರುವುದರ ಬಗ್ಗೆ ಎರಡನೇ ಮಾತಿಲ್ಲ. ನಿಮ್ಮ ದಿನಚರಿಯಲ್ಲಿ ಕನಿಷ್ಠ ಒಂದಿಷ್ಟು ಸಮಯವನ್ನಾದರೂ ಇದರ ಸಬಲತೆಗೆ ಬಳಸುವುದು ಎಲ್ಲರಿಗೂ ಉತ್ತಮ.


Discover more from cosmiqgrace.com

Subscribe to get the latest posts sent to your email.

1 comment

Leave a Reply

Author

cosmiqgrace@gmail.com

Related Posts