ಎಲ್ಲರಿಗೂ ನಮಸ್ಕಾರ!
ನಮ್ಮ ಹಿರಿಯರು ಹೇಳುವಂತೆ ಮನುಷ್ಯ ಜೀವನ ಉನ್ನತವಾದದ್ದು. ಉಳಿದೆಲ್ಲ ಪ್ರಾಣಿ ಪಕ್ಷಿಗಳಿಗಿರುವ ಹೆಚ್ಚು ಬುದ್ಧಿ ಮತ್ತು ಅದನ್ನು ನಮಗೆ ಬೇಕಾದಲ್ಲಿ ನಿರ್ದೇಶಿಸುವ ಸಾಮರ್ಥ್ಯ ನಮಗಿದೆ. ಈ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿ ಜೀವನದ ಶ್ರೇಷ್ಠತೆಯನ್ನು ಪ್ರತಿಯೊಬ್ಬರೂ ಕಾಣಬೇಕೆಂದು ನನ್ನ ಆಕಾಂಕ್ಷೆ
ಇನ್ನು ನನ್ನನ್ನು ಪರಿಚಯಿಸಕೊಳ್ಳಬೇಕೆಂದರೆ, ನನ್ನ ಉದ್ಯೋಗ ಸಾಫ್ಟವೇರ್ ಎಂಜಿನಿಯರ್. ಪತಿ ಮತ್ತು ಮಗನೊಂದಿಗೆ ಚಿಕ್ಕ ಸಂಸಾರ ಹೊಂದಿದ್ದೇನೆ. ನನ್ನ ತಂದೆ ತಾಯಿ ನನ್ನ ಚಿಕ್ಕಂದಿನಲ್ಲೇ ಆಧ್ಯಾತ್ಮಿಕ ಜೀವನ ಪರಿಚಯಿಸಿದ್ದರು. ಆದರೂ ಸಹ ಔಪಚಾರಿಕ ಆಧ್ಯಾತ್ಮಿಕ ಪಯಣ ಶುರುವಾಗಿದ್ದು ಆರು ವರ್ಷಗಳ ಹಿಂದೆ ನನ್ನ ರೇಕಿ ದೀಕ್ಷೆ ಪಡೆದ ನಂತರ. ನನ್ನನ್ನು ನಾನು ಅರಿಯಲು, ನನ್ನ ಶಕ್ತಿ ಮತ್ತು ದೌರ್ಬಲ್ಯಗಳನ್ನು ತಿಳಿದುಕೊಳ್ಳಲು ರೇಕಿ ಸಹಾಯ ಮಾಡಿತು. ಆಧ್ಯಾತ್ಮಿಕತೆಯ ಆಳವನ್ನು ತಿಳಿಯಲು, ಅದು ನೆಮ್ಮದಿಯುತ ಜೀವನಕ್ಕೆ ಎಷ್ಟು ಮುಖ್ಯ ಎಂಬುದನ್ನು ತಿಳಿಯಲು ಸಹ ಅನುವು ಮಾಡಿಕೊಟ್ಟಿತು. ಅತ್ಯುನ್ನತ ಸತ್ಯವನ್ನು ತಿಳಿಯುವ ನನ್ನ ಈ ಸುಂದರ ಪಯಣದಲ್ಲಿ ನಾನು ಸ್ವಲ್ಪ ಜ್ಞಾನವನ್ನೂ ಸಂಪಾದಿಸತೊಡಗಿದೆ. ಈ ಜಾಲತಾಣವನ್ನು ನನ್ನ ಅನುಭವವನ್ನು ಹಂಚಿಕೊಳ್ಳಲು ತಯಾರಿಸಲಾಗಿದೆ.